ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜಾದಿಗಳು ಹಾಗೂ ಉತ್ಸವಗಳ ವಿವರ:

  • ನಿತ್ಯ ಪೂಜಾದಿಗಳು : ಪ್ರತಿ ದಿನ ಬೆಳಿಗ್ಗೆ 6 ಘಂಟೆಗೆ, ಮಧ್ಯಾಹ್ನ 1 ಘಂಟೆಗೆ ಹಾಗೂ ರಾತ್ರಿ 8.30 ಕ್ಕೆ – ಹೀಗೆ ತ್ರಿಕಾಲದಲ್ಲಿ ಪೂಜೆ ನಡೆಯುತ್ತದೆ.
  • ದೈನಂದಿನ 21 ಆವರ್ತನ ಗಣಪತ್ಯುಪನಿಷತ್ ಅಭಿಮಂತ್ರಣ ಪೂರ್ವಕ ಕಲಶ ಹಾಗೂ ಏಕನಾರಿಕೇಳ ಗಣಯಾಗ
  • ಪ್ರತಿ ಮಂಗಳವಾರಗಳಲ್ಲಿ ಪಂಚಕಜ್ಜಾಯ ಸಮರ್ಪಣೆ
  • ಪ್ರತಿ ಚೌತಿಗಳಲ್ಲಿ 6 ತೆಂಗಿನಕಾಯಿ ಗಣಹೋಮ ಹಾಗೂ ಪಂಚಭಕ್ಷ ಸಮರ್ಪಣೆ.
  • ಶ್ರಾವಣ ಮಾಸದಲ್ಲಿ ಸಹಸ್ರಾವರ್ತನೆ ಗಣಪತಿ ಅತರ್ವಶೀರ್ಷಾ ಅಭಿಷೇಕ ಹಾಗೂ ಬ್ರಾಹ್ಮಣಾರಾಧನೆ.
  • ಬಾದ್ರಪದ ಶುದ್ಧ ಗಣೇಶ ಚತುರ್ಥಿ ವಿಶೇಷ ಕಟ್ಟು ಕಟ್ಟಲೆ ವಿನಿಯೋಗ.
  • ಅಶ್ವೀಜ ಕಾರ್ತಿಕ ಮಾಸದಲ್ಲಿ ಪಕ್ಷಿ ಜಾಗರ ಪೂಜೆ ವಿನಿಯೋಗ.
  • ಕಾರ್ತಿಕ ಮಾಸದಲ್ಲಿ ಧಾತ್ರಿ ಹೋಮ ಹಾಗೂ ವನಭೋಜನ
  • ಕಾರ್ತಿಕ ದೀಪಾರಾದನೆ ಹಾಗೂ ರಂಗಪೂಜಾ ವಿನಿಯೋಗ
  • ಮಾರ್ಗಶಿರದಲ್ಲಿ ಬ್ರಹ್ಮ ರಥೋತ್ಸವ ಹಾಗೂ ಸಂತರ್ಪಣೆ.
  • ಧನುರ್ಮಾಸದಲ್ಲಿ ದೈನಂದಿನ ಹುಗ್ಗಿ ದೋಸೆ ನೈವೇದ್ಯ
  • ಧನುರ್ಮಾಸದಲ್ಲಿ ಬ್ರಾಹ್ಮಣಾರಾಧನೆ.
  • ವೈಶಾಖ ಮಾಸದಲ್ಲಿ ಗುಡೋಧಕ ನೈವೇದ್ಯ.
  • ವೈಶಾಖ ಮಾಸದಲ್ಲಿ ವಸಂತಾರಾಧನೆ.
  • ಪ್ರತಿ ಸಂಕಷ್ಟ ಹರ ಚತುರ್ಥಿ ದಿನದಂದು ದೊಡ್ಡ ರಂಗಪೂಜೆ ಸಹಿತ ಪುಷ್ಪಕ ರಥೋತ್ಸವ ಹಾಗೂ ವಸಂತಾರಾಧನೆ.
ಶ್ರೀ ಕ್ಷೇತ್ರದ ಹಬ್ಬ ಮತ್ತು ಉತ್ಸವಗಳು

ವಾರ್ಷಿಕ ಬ್ರಹ್ಮರಥೋತ್ಸವ


ಲಕ್ಷದೀಪೋತ್ಸವ


ಮೂಡುಗಣಪತಿ ಸೇವೆ


ಸಹಸ್ರ ನಾರಿಕೇಳ ಗಣಯಾಗ


ಭಾದ್ರಪದ ಶುದ್ಧ ಗಣೇಶ ಚತುರ್ಥಿ:


ಪಲ್ಲಕ್ಕಿ ಉತ್ಸವ