ಶ್ರೀ ಕ್ಷೇತ್ರದ ಬಗ್ಗೆ ಮಾಹಿತಿ

ಪರಶುರಾಮ ಸ್ರಷ್ಟಿಯ ಸಪ್ತಕ್ಷೇತ್ರಗಳಲ್ಲಿ ಕುಂಭಾಸಿಯೂ ಒಂದಾಗಿದೆ. ಇದನ್ನು ಕ್ರತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧುಕಾನನವೆಂದೂ, ದ್ವಾಪರಯುಗದಲ್ಲಿ ಗೌತಮ ಕ್ಷೇತ್ರವೆಂದೂ,ಕಲಿಯುಗದಲ್ಲಿ ಕುಂಭಾಸಿಯೆಂದು ಕರೆಯುತ್ತಾರೆ. ಈ ಕ್ಷೇತ್ರವು ಅನಾವೃಷ್ಟಿಯಿಂದ ಪೀಡಿತವಾದಾಗ ಗೌತಮ ಮುನಿಗಳು ಇಲ್ಲಿ ನೆಲೆಸಿ ಯಜ್ನ ಯಾಗಾದಿಗಳನ್ನು ನಡೆಸಿದರು. ಹೀಗೆ ಈ ಕ್ಷೇತ್ರವು ಯುಗಾಂತರಗಳಿಂದಲೂ ಪವಿತ್ರವಾದುದು ಎಂದು ಪುರಾಣಗಳು ಸಾರುತ್ತವೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ – ಕುಂದಾಪುರದ ನಡುವೆ ಹೆದ್ದಾರಿಯಿಂದ ಒಂದು ಕಿ.ಮೀ. ಪೂರ್ವಕ್ಕೆ ಕುಂಭಾಸಿ ಕ್ಷೇತ್ರದಲ್ಲಿ ಆನೆಗುಡ್ದೆ ಇದೆ. ಕುಂಭಾಸಿಯು ಸಪ್ತಕ್ಷೇತ್ರಗಳಲ್ಲಿ ಒಂದಾಗಿದ್ದು ಇಲ್ಲಿಯ ಆನೆಗುಡ್ದೆ ಶ್ರೀ ವಿನಾಯಕ ದೇವಸ್ಥಾನವು ಅತೀ ಪುರಾತನವಾಗಿದ್ದು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ನಿತ್ಯವೂ ಯಾತ್ರಾರ್ಥಿಗಳಾಗಿ ಬಂದು ಶ್ರೀ ದೇವರ ದರ್ಶನ ಪಡೆದು ಸೇವೆಯನ್ನು ಮಾಡಿಸಿಕೊಂಡು ಇಷ್ಟಾರ್ಥವನ್ನು ಪಡೆದು ಕೃತಾರ್ಥಾರಾಗುತ್ತಾರೆ.


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಮತ್ತು ಉತ್ಸವಗಳು

ದೇವಸ್ಥಾನದಲ್ಲಿ ಇರುವ ಹಬ್ಬ ಮತ್ತು ಉತ್ಸವಗಳು

01

ಬ್ರಹ್ಮ ರಥೋತ್ಸವ

ಶ್ರೀ ಸಂವತ್ಸರ ಮಾರ್ಗಶಿರ ಶುದ್ಧ ಚಥುರ್ಥಿಯಂದು ಶ್ರೀ ದೇವರ ಬ್ರಹ್ಮ ರಥೋತ್ಸವವು ನಡೆಯುತ್ತದೆ

02

ಲಕ್ಷದೀಪೋತ್ಸವ

ಶ್ರೀ ಕ್ಷೇತ್ರದಲ್ಲಿ ಲಕ್ಷದೀಪೋತ್ಸವವು ಅತ್ಯಂತ ಅಧ್ಧೂರಿಯಿಂದ ನಡೆಯುತ್ತದೆ

03

ಗಣಪತಿ ಚತುರ್ಥಿ

ವರ್ಷಂಪ್ರತಿ ವಿಜ್ರಂಬಣೆಯಿಂದ ಗಣೇಶ ಚಥುರ್ಥಿಯನ್ನು ದೇವಸ್ಥಾನದಲ್ಲಿ ಆಚರಿಸಲಾಗುವುದು

04

ಪಲ್ಲಕ್ಕಿ ಉತ್ಸವ

ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಅಲಂಕರಿಸಿ ಪಲ್ಲಕ್ಕಿ ಉತ್ಸವವನ್ನು ನಡೆಸಲಾಗುವುದು

ಇತರ ಉತ್ಸವಗಳು