Development Work

  • 2023 ರಲ್ಲಿ ದೇವಳ ಹೆಬ್ಬಾಗಿಲಿಗೆ ತಾಗಿಕೊಂಡಿರುವ ಪೌಳಿಯಲ್ಲಿ ಸುಮಾರು ಒಂದು ಕಾಲು  ಕೋಟಿ ವೆಚ್ಚದಲ್ಲಿ ಸಾಗುವಾನಿ ಮರದಿಂದ ನಿರ್ಮಾಣವಾದ ದಾರುಶಿಲ್ಪ, ಹಾಗೂ ಬೆಳ್ಳಿಯ ವಸಂತ ಮಂಟಪ ಕಲಾ ಪ್ರೌಡಿಮೆಗೆ ಸಾಕ್ಷಿಯಾಗಿದೆ.
  • ಸುಮಾರು 15 ಲಕ್ಷ ವೆಚ್ಚದಲ್ಲಿ ದೇವರಿಗೆ ನಿತ್ಯ ನೈವೇದ್ಯಕ್ಕೆ ಬೇಕಾಗುವ ಹಾಲು ಮೊಸರಿಗಾಗಿ ಶಾಶ್ವಾತ ಗೋ ಕುಟೀರವನ್ನು ನಿರ್ಮಾಣ ಮಾಡಲಾಗಿದೆ.
  • ದೇವಸ್ಥಾನ ಆವರಣದಲ್ಲಿ ಸುಗಮ ವಾಹನ ಸಂಚಾರಕ್ಕೆ ಉತ್ತಮ ಪಾರ್ಕಿಂಗ್ ವ್ಯವಸ್ತೆ  ಕಲ್ಪಿಸಲಾಗಿದೆ.
  • ಶ್ರೀ ದೇವಳದ ಅನ್ನದ ಚತ್ರದ ಮೇಲ್ಚಾವಣಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ಕೆನರಾ ಬ್ಯಾಂಕ್ ನ ಸಹಪ್ರಾಯೋಜಕತ್ವದಲ್ಲಿ ಸೊಲಾರ್ ವಿದ್ಯುತ್ ಘಟಕ  ಸ್ಥಾಪಿಸಲಾಗಿದೆ.
  • ದೇವಳದ ಹಿಂಬಾಗ 1 ಕಿಲೊಮೀಟರ್ ದೂರದಲ್ಲಿ ಧಾನಿಯೊಬ್ಬರಿಂದ ಬ್ರಹತ್ ತೆರೆದ ಭಾವಿಯನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ.
    ದೇವರ ಪ್ರಸಾದ ಕಡುಬು ಹಾಗೂ ಪಂಚಕಜ್ಜಾಯ ಹಾಗೂ ಇತ್ಯಾದಿ ತಯಾರಿಸಲು  ನೂತನ ಹೈಜಿನಿಕ್  ಕಟ್ಟಡವನ್ನು ನಿರ್ಮಿಸಲು  ಅಂದಾಜಿಸಲಾಗಿದೆ.
  • ಪ್ತತೀ ವರ್ಷವೂ ಶ್ರೀ ದೇವಳದ ವತಿಯಿಂದ ಸುಮಾರು ಹತ್ತರಿಂದ ಇಪ್ಪತ್ತು ಲಕ್ಷಕ್ಕೂ ಅದಿಕ ಮೊತ್ತವನ್ನು ಇತರ ದೇವಾಲಯದ ಜೀರ್ಣೋದ್ಧಾರ ಹಾಗೂ ಕ್ಯಾನ್ಸರ್ ಕಿಡ್ನಿ ಹಾಗೂ ಹೃದಯದ ರೋಗಿಗಳಿಗೆ ದೇಣಿಗೆಯನ್ನು ಕೊಡಲಾಗುತ್ತಿದೆ.