ತಾ || 05-06-2019
ತೆಕ್ಕಟ್ಟೆ ಜೂನ್ 5. ಲೋಕ ಕಲ್ಯಾಣಾರ್ಥವಾಗಿ ಹಾಗೂ ಮಳೆ ಬೆಳೆ ಸುಭಿಕ್ಷೆಗಾಗಿ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಶ್ರೀ ದೇವರಿಗೆ ಸಿಯಾಳಾಭಿಷೇಕ ಹಾಗೂ ಸಹಸ್ರಾವರ್ತನ ಅಥರ್ವಶೀರ್ಷ ಉಪನಿಷತ್ ಕಲಶಾಭಿಷೇಕ ನೆರವೇರಿತು.
ದೇವಳದ ಅನುವಂಶಿಕ ಪರ್ಯಾಯ ಅರ್ಚಕ ಕೆ.ಸೂರ್ಯನಾರಾಯಣ ಉಪಾಧ್ಯಾಯ ಮಾತನಾಡಿ ನಮ್ಮ ಜೆಲ್ಲೆ ಹಾಗೂ ರಾಜ್ಯದಲ್ಲಿ ಎದುರಾದ ಕುಡಿಯುವ ನೀರಿನ ಬವಣೆ ಉಧ್ಭವಗೊಂಡಿದೆ ಹಾಗೂ ಮುಂಗಾರು ಆಗಮನ ವಿಳಂಬವಾದ ಈ ಸಂದರ್ಭದಲ್ಲಿ ರಾಜ್ಯ ಎಲ್ಲಾ ಧಾರ್ಮಿಕ ಕ್ಷೇತ್ರದಲ್ಲಿ ವರುಣ ದೇವನ ಆರಾಧನೆ ಎಲ್ಲೆಡೆ ನಡೆಯುತಿದೆ ಅದೇ ರೀತಿಯಲ್ಲಿ ಶ್ರೀ ಕ್ಷೇತ್ರ ಆನೆಗುಡ್ಡೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಮಳೆ ಬೆಳೆ ಸುಭಿಕ್ಷೆಗಾಗಿ 25 ಮಂದಿ ಋತ್ವಿಜರೊಂದಿಗೆ ಸಹಸ್ರಾವರ್ತನ ಅಥರ್ವಶೀರ್ಷ ಉಪನಿಷತ್ ಕಲಶಾಭಿಷೇಕ ಅಭಿಮಂತ್ರಣ ಮಾಡಿ ಸುವರ್ಣ ಕಲಶದಲ್ಲಿ ಅರ್ಪಣೆ ಮಾಡಲಾಗಿದೆ ಎಂದರು.
ಧರ್ಮಾಧರ್ಶಿ ಕೆ.ಶ್ರೀರಮಣ ಉಪಾಧ್ಯಯ ಹಾಗೂ ಭಕ್ತರು ಉಪಸ್ಥಿತರಿದ್ದರು