ಕಾರ್ಯಕ್ರಮಗಳು

ತಾ || 16-06-2019

ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವೇ|ಮೂ|ವಾದಿರಾಜ್ ಭಟ್ ಹೂವಿನಕೆರೆ ಹಾಗೂ ವಾಧೀಶ ಭಟ್ ಅವರ ಸಮ್ಮುಖದಲ್ಲಿ ಮುಂದಿನ ಪರ್ಯಾಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.ಈ ಹಿಂದಿನ ಪರ್ಯಾಯ ಅರ್ಚಕರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರು ಮುಂಬರುವ ಆಗಮನ ಪರ್ಯಾಯ ಅರ್ಚಕರಾದ ಚಂದ್ರಕಾಂತ್ ಉಪಾಧ್ಯಾಯ ಮತ್ತು ಸಹೋದರರಿಗೆ ಸಂಪ್ರದಾಯದಂತೆ ಪರ್ಯಾಯವನ್ನು ಹಸ್ತಾಂತರಿಸಿದರು.ದೇವಳದ ಆಡಳಿತ ಧರ್ಮಾಧರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಹಾಗೂ ಭಕ್ತರು ಉಪಸ್ಥಿತರಿದ್ದರು