+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ಸಂಕಷ್ಟಹರ ಚತುರ್ಥಿ


ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ, ಸಹಸ್ರನಾರಿಕೇಳ ಗಣಪತಿ ಯಾಗ, ಸತ್ಯಗಣಪತಿ ವ್ರತ, ಮಹಾಪೂಜೆ ಹಾಗೂ ಅನ್ನಸಂತರ್ಪಣೆಯು ರವಿವಾರ ನಡೆಯಿತು.
​ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀರಮಣ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದರ್ಶಿಗಳಾದ ಕೆ. ಪದ್ಮನಾಭ ಉಪಾಧ್ಯಾಯ, ನಿರಂಜನ್ ಉಪಾಧ್ಯಾಯ, ಆಡಳಿತ ಹಾಗೂ ಅರ್ಚಕ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

​ವಿರಳವಾದ ಮಳೆ ಹಾಗೂ ರವಿವಾರವಾದ್ದರಿಂದ ಸಂಕಷ್ಟಹರ ಚತುರ್ಥಿಗೆ ಮುಂಜಾನೆಯಿಂದಲೇ ಜಿಲ್ಲೆಯ ಮೂಲೆ ಮೂಲೆಯಿಂದಲೂ 20 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಐದು ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ ಎಂದು ಆಡಳಿತ ಧರ್ಮದರ್ಶಿಗಳು ತಿಳಿಸಿದ್ದಾರೆ.
​
ಸಂಜೆ ನೇರಂಬಳ್ಳಿಯ ಜಯಶ್ರೀ ಪ್ರಾಣೇಶ ತಂತ್ರಿ ಹಾಗೂ ಸಹೋದರಿಯರಿಂದ ಶಾಸ್ತ್ರೀಯ ಭಕ್ತಿ ಸಂಗೀತ, ಹಾಗೂ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದ ಹಾಗೂ ಸಿದ್ಧಾಪುರದ ಯಕ್ಷ ನುಡಿಸಿರಿ ಬಳಗ ಇವರಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ: ‘ಸಮರ ಸನ್ನಾಹ’ ಪ್ರದರ್ಶನಗೊಂಡಿತು.

ರಾತ್ರಿ ಮಹಾರಂಗ ಪೂಜಾದಿ ರಜತ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತು.