ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜಾದಿಗಳು ಹಾಗೂ ಉತ್ಸವಗಳ ವಿವರ:
- ದೈನಂದಿನ ೩೧ ಆವರ್ತನ ಗಣಪತಿ ಉಪನಿಷತ್ ಅಭಿಮಂತ್ರಣ ಪೂರ್ವಕ ಕಲಶ, ಏಕ ನಾರಿಕೇಳ ಗಣಹೋಮ, ಸಾಮೂಹಿಕವಾಗಿ 108 ಕಾಯಿ ಗಣಹೋಮ ,( ಏಕಾದಶಿ ಹೊರತು ಪಡಿಸಿ) ದ್ವಾದಶಿ 24 ಕಾಯಿ ಗಣಹೋಮ ನಡೆಯುತ್ತದೆ.
- ಪ್ರತೀದಿನ ಮುಂಜಾನೆ ಪೂಜೆಯ ನಂತರ ದೇವರಿಗೆ ಸಮರ್ಪಿಸಿದ ಬೆಲ್ಲ ಕಡಲೆಯ ಪಂಜಕಜ್ಜಾಯ ವಿತರಣೆ.
- ಪ್ರತೀದಿನ 108 ಕಾಯಿ ಗಣಹೋಮ ಹಾಗೂ ಸಂಕಷ್ಟಹರ ಚತುರ್ಥಿಯ ದಿನ 1008 ಕಾಯಿ ಗಣಹೋಮ ನಡೆಯತ್ತದೆ.( ಏಕಾದಶಿ ದ್ವಾದಶಿ ಹೊರತುಪಡಿಸಿ)
- ಶ್ರಾವಣ ಮಾಸದಲ್ಲಿ ಸಹಸ್ರಾವರ್ತನೆ ಗಣಪತಿ ಅತರ್ವಶೀರ್ಷಾ ಅಭಿಷೇಕ ಹಾಗೂ ಬ್ರಾಹ್ಮಣಾರಾಧನೆ.
- ಬಾದ್ರಪದ ಶುದ್ಧ ಗಣೇಶ ಚತುರ್ಥಿ ವಿಶೇಷ ಕಟ್ಟು ಕಟ್ಟಲೆ ವಿನಿಯೋಗ.
- ಅಶ್ವೀಜ ಕಾರ್ತಿಕ ಮಾಸದಲ್ಲಿ ಪಕ್ಷಿ ಜಾಗರ ಪೂಜೆ ವಿನಿಯೋಗ.
- ಕಾರ್ತೀಕ ಮಾಸದಲ್ಲಿ ಮದ್ಯಾಹ್ನ ದಾತ್ರಿ ಹೋಮ, ವನಭೋಜನ, 1008 ಕಾಯಿ ಗಣಹೋಮ, ರಾತ್ತಿ ಮಹಾರಂಗಪೂಜೆ, ಲಕ್ಷದೀಪ ಸಹಿತ ರಜತ ರಥೋತ್ಸವ ಹಾಗೂ ಸುಡು ಮದ್ದು ಪ್ರದರ್ಶನ ನಡೆಯುತ್ತದೆ
- ಕಾರ್ತಿಕ ದೀಪಾರಾದನೆ ಹಾಗೂ ರಂಗಪೂಜಾ ವಿನಿಯೋಗ
- ಶ್ರೀ ದೇವಳದಲ್ಲಿ ಕಾರ್ತೀಕ ಮಾಸದ ಸಂಕಷ್ಟಹರ ಚತುರ್ಥಿಯಿಂದ ಜೇಷ್ಟ ಮಾಸದ ಸಂಕಷ್ಟಹರ ಚತುರ್ಥೀಯ ವರೆಗೆ ಮಾತ್ರ ಪುಷ್ಪಕ ರಥೋತ್ಸವ ಹಾಗೂ ರಜತ ರಥೋತ್ಸವ ಸೇವೆಗಳು ನಡೆಯುತ್ತದೆ
- ಧನುರ್ಮಾಸದಲ್ಲಿ ದೈನಂದಿನ ಹುಗ್ಗಿ ದೋಸೆ ನೈವೇದ್ಯ
- ಧನುರ್ಮಾಸದಲ್ಲಿ ಬ್ರಾಹ್ಮಣಾರಾಧನೆ.
- ವೈಶಾಖ ಮಾಸದಲ್ಲಿ ಗುಡೋಧಕ ನೈವೇದ್ಯ.
- ವೈಶಾಖ ಮಾಸದಲ್ಲಿ ವಸಂತಾರಾಧನೆ.
- ಪ್ರತಿ ಸಂಕಷ್ಟ ಹರ ಚತುರ್ಥಿ ದಿನದಂದು ದೊಡ್ಡ ರಂಗಪೂಜೆ ಸಹಿತ ಪುಷ್ಪಕ ರಥೋತ್ಸವ ಹಾಗೂ ವಸಂತಾರಾಧನೆ.
ಶ್ರೀ ಕ್ಷೇತ್ರದ ಹಬ್ಬ ಮತ್ತು ಉತ್ಸವಗಳು
ವಾರ್ಷಿಕ ಬ್ರಹ್ಮರಥೋತ್ಸವ
ಲಕ್ಷದೀಪೋತ್ಸವ
ಮೂಡುಗಣಪತಿ ಸೇವೆ
ಸಹಸ್ರ ನಾರಿಕೇಳ ಗಣಯಾಗ
ಭಾದ್ರಪದ ಶುದ್ಧ ಗಣೇಶ ಚತುರ್ಥಿ:
ಪಲ್ಲಕ್ಕಿ ಉತ್ಸವ