ದಿನಾಂಕ 02.08.2026ರ ಭಾನುವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಕಳೆದ 37 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀಯುತ ನಾಗೇಶ್ ರಾವ್ ಹಾಗೂ ಕಳೆದ 14 ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಭಾಸ್ಕರ ಮೆಂಡನ್ ಅವರು ದಿನಾಂಕ 31.07.2026 ರಂದು ನಿವೃತ್ತರಾಗಿದ್ದಾರೆ.
ಈ ಸಂದರ್ಭದಲ್ಲಿ ಆಡಳಿತ ಕಚೇರಿಯಲ್ಲಿ ನಡೆದ ಕಿರು ಸಮಾರಂಭದಲ್ಲಿ, ನಿವೃತ್ತರಾದ ಇಬ್ಬರಿಗೂ ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀರಮಣ ಉಪಾಧ್ಯಾಯರು ಹಾಗೂ ಪರ್ಯಾಯ ಅರ್ಚಕರಾದ ಕೆ. ಶಶಿಕಾಂತ ಉಪಾಧ್ಯಾಯರು ಶ್ರೀದೇವಳದ ಪರವಾಗಿ ಕೃತಜ್ಞತಾಪೂರ್ವಕವಾಗಿ ಗೌರವಿಸಿ ಸನ್ಮಾನಿಸಿದರು.
ಜೊತೆಗೆ, ಅವರ ಮುಂದಿನ ನಿವೃತ್ತ ಜೀವನವು ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಆಡಳಿತ ಕಚೇರಿಯ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದು ಶುಭಾಶಯ ಕೋರಿದರು.