ಪ್ರಿಯ ಭಕ್ತಾಭಿಮಾನಿಗಳಲ್ಲಿ ವಿನಂತಿ
ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿಯಂದು ಶ್ರೀ ವಿನಾಯಕ ಚತುರ್ಥಿ ಪ್ರಯುಕ್ತ ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ 27-08-2025ನೇ ಬುಧವಾರ “ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ” ಜರುಗಲಿರುವುದು.
ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ವಿನಾಯಕ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಶ್ರೀ ಕೆ. ಶ್ರೀರಮಣ ಉಪಾಧ್ಯಾಯ (ಆನುವಂಶಿಕ ಆಡಳಿತ ಮೊಕೇಸರರು),
ಶ್ರೀ ಕೆ. ವ್ಯಾಸ ಉಪಾಧ್ಯಾಯ ಮತ್ತು ಸಹೋದರರು (ಪರ್ಯಾಯ ಅರ್ಚಕರು),
ಶ್ರೀ ಕೆ. ನಿರಂಜನ ಉಪಾಧ್ಯಾಯ,
ಶ್ರೀ ಕೆ. ಪದ್ಮನಾಭ ಉಪಾಧ್ಯಾಯ (ಆನುವಂಶಿಕ ಮೊತ್ತೇಸರರು)
ದಿನಾಂಕ : 26-08-2025, ಮಂಗಳವಾರ
ಗೌರಿ ತೃತೀಯಾ — ಅಪರಾಹ್ನ 2:00 ರಿಂದ 4:00 ಗಂಟೆಯವರೆಗೆ ಭಜನಾ ಕಾರ್ಯಕ್ರಮ (ವಿಷ್ಣುಮೂರ್ತಿ ಭಜನಾ ತಂಡ, ಕುಂಭಾಸಿ). ಸಂಜೆ 4:00 ಗಂಟೆಯಿಂದ ತೆಂಕುತಿಟ್ಟಿನ ಪ್ರಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ.
ಪ್ರಸಂಗ : ಸುಧನ್ವ ಮೋಕ್ಷ
ಭಾಗವತರು : ರವಿಚಂದ್ರ ಕನ್ನಡಿಕಟ್ಟೆ |
ಮದ್ದಳೆ : ಚೈತನ್ಯ ಪದ್ಯಾಣ |
ಚಂಡೆ : ಕೌಶಲ್ ಪುತ್ತಿಗೆ |
ಚಕ್ರತಾಳ : ನಿಶ್ವತ್ ಜೋಗಿ |
ಅರ್ಜುನ : ಸಪರಂಗಳ ಈಶ್ವರ ಭಟ್ |
ಸುಧನ್ವ : ವಾಸುದೇವರಂಗ ಭಟ್ |
ಕೃಷ್ಣ : ಪ್ರಸಾದ್ ಸವಣೂರು
ದಿನಾಂಕ : 27-08-2025, ಬುಧವಾರ
ಗಣೇಶ ಚತುರ್ಥಿ
ಅಪರಾಹ್ನ 2:30 ರಿಂದ 3:30 ಗಂಟೆಗೆ ಭಜನಾ ಕಾರ್ಯಕ್ರಮ — ಶ್ರೀ ವಿಶ್ವೇಶ್ವರ ಮಹಿಳಾ ಭಜನಾ ಮಂಡಳಿ, ಆನೆಗುಡ್ಡೆ, ಕುಂಭಾಸಿ.
ಸಂಜೆ 3:30 ರಿಂದ 4:30 ಗಂಟೆಗೆ ದಾಸವಾಣಿ — ಎಲ್. ಆರ್. ವಿಜಯರಂಗ, ಬೆಂಗಳೂರು.
ಸಂಜೆ 4:30 ರಿಂದ 6:30 ಗಂಟೆಗೆ ಕೊಳಲು ವಾದನ — ಪ್ರಣವ್ ಅಡಿಗ (ಅಂಬಲಪಾಡಿ, ಉಡುಪಿ) ಹಾಗೂ ಬಳಗ.
ಸಂಜೆ 6:30 ರಿಂದ 8:30 ಗಂಟೆಗೆ ಯಕ್ಷಾಂತರಂಗ (ರಿ), ವ್ಯವಸಾಯಿ ಯಕ್ಷ ತಂಡ, ಕೋಟ ಇವರಿಂದ ಯಕ್ಷಗಾನ ಪ್ರಸಂಗ ಕುಶ-ಲವ.
ರಾತ್ರಿ 9:30 ಗಂಟೆಯಿಂದ ಶ್ರೀ ದಶಾವತಾರ ಸೇವೆಯಾಟ ವಿವಿಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಪ್ರಸಂಗ ಭೀಷ್ಮವಿಜಯ.
ಸರ್ವರಿಗೂ ಆದರದ ಸ್ವಾಗತ
ಆಡಳಿತ ಮಂಡಳಿ, ಅರ್ಚಕ ಮಂಡಳಿ ಮತ್ತು ಪರ್ಯಾಯ ಅರ್ಚಕರು