ಪ್ರಿಯ ಭಕ್ತಾಭಿಮಾನಿಗಳಲ್ಲಿ ವಿನಂತಿ
ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿಯ ಶ್ರೀ ವಿನಾಯಕ ಚತುರ್ಥಿ ಪ್ರಯುಕ್ತ ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ 31-08-2022ನೇ ಬುಧವಾರ “ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ” ವರ್ಷಂಪ್ರತಿಯಂತೆ ಸಾಂಪ್ರದಾಯಿಕ ರೀತಿಯಲ್ಲಿ ಜರುಗಲಿರುವುದು.
ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ವಿನಾಯಕ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಶ್ರೀ ಕೆ. ಶ್ರೀರಮಣ ಉಪಾಧ್ಯಾಯ (ಆನುವಂಶಿಕ ಆಡಳಿತ ಧರ್ಮದರ್ಶಿ)
ಶ್ರೀ ಕೆ. ದೇವಿದಾಸ ಉಪಾಧ್ಯಾಯ (ಪರ್ಯಾಯ ಅರ್ಚಕರು)
ಶ್ರೀ ಕೆ. ವಿಠಲ ಉಪಾಧ್ಯಾಯ
ಶ್ರೀ ಕೆ. ಸೂರ್ಯನಾರಾಯಣ ಉಪಾಧ್ಯಾಯ (ಆನುವಂಶಿಕ ಧರ್ಮದರ್ಶಿಗಳು)
ದಿನಾಂಕ : 30-08-2022, ಮಂಗಳವಾರ
ಸಾಯಂಕಾಲ 5:00 ಗಂಟೆಯಿಂದ ಯಕ್ಷಗಾನ ವೈಭವ.
ಭಾಗವತರು : ಶ್ರೀ ರಾಘವೇಂದ್ರ ಮಯ್ಯ (ಹಾರಾಡಿ), ಶ್ರೀ ರಾಘವೇಂದ್ರ ಆಚಾರ್ (ಅನ್ನಾಲೆ),
ಶ್ರೀ ಸತ್ಯನಾರಾಯಣ ಪುಣಿಚಿತ್ತಾಯ ಅಕ್ಕಿ ಹಾಗೂ ಶ್ರೀಮತಿ ಅಮೃತಾ ಅಡಿಗ.
ದಿನಾಂಕ : 31-08-2022, ಬುಧವಾರ
ಅಪರಾಹ್ನ 3:30 ಗಂಟೆಯಿಂದ ಕುಣಿತ ಭಜನೆ – ಶ್ರೀ ರಾಮ ಭಜನಾ ಮಂದಿರ (ಮಹಿಳಾ ತಂಡ), ಬೀಜಾರಿ-ಗೋಪಾಡಿ ಇವರಿಂದ.
ಸಾಯಂಕಾಲ 5:00 ಗಂಟೆಯಿಂದ ವೀಣಾವಾದನ – ವಿದುಷಿ ಶ್ರೀಮತಿ ಪವನ ಜಿ. ಆಚಾರ್ ಹಾಗೂ ವಿಪಂಚಿ ಬಳಗ, ಮಣಿಪಾಲ ಇವರಿಂದ.
ಸಾಯಂಕಾಲ 6:00 ಗಂಟೆಯಿಂದ ಯಕ್ಷಗಾನ “ದಕ್ಷಾಧ್ವರ” (ಯಕ್ಷಾಂತರಂಗ (ರಿ.), ಕೋಟ ಇವರಿಂದ).
ರಾತ್ರಿ 9:30 ಗಂಟೆಗೆ ಯಕ್ಷಗಾನ “ರತ್ನಾವತಿ ಕಲ್ಯಾಣ” (ದಶಾವತಾರ ಸೇವೆಯಾಟ ಅತಿಥಿ ಕಲಾವಿದರ ಕೂಡುವಿಕೆಯಿಂದ).
ಸರ್ವರಿಗೂ ಆದರದ ಸ್ವಾಗತ
ಪರ್ಯಾಯ ಅರ್ಚಕರು, ಆಡಳಿತ ಮಂಡಳಿ ಮತ್ತು ಅರ್ಚಕ ಮಂಡಳಿ