ಪ್ರಿಯ ಭಕ್ತಾಭಿಮಾನಿಗಳಲ್ಲಿ ವಿನಂತಿ
ದಿನಾಂಕ 03.07.2026ರ ಶುಕ್ರವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ ಜರುಗಲಿದೆ.
ಈ ಪ್ರಯುಕ್ತ ದೇವಸ್ಥಾನದಲ್ಲಿ ಈ ಕೆಳಗಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ:
ಧಾರ್ಮಿಕ ಕಾರ್ಯಕ್ರಮಗಳು:
ಮಧ್ಯಾಹ್ನ: ಅಷ್ಟೋತ್ತರ ಸಹಸ್ರನಾರಿಕೇಳ ಗಣಯಾಗ, ಸತ್ಯಗಣಪತಿ ವ್ರತ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ.
ರಾತ್ರಿ: ಮಹಾರಂಗಪೂಜೆ ಸಹಿತ ರಜತ ರಥೋತ್ಸವ.
ಸಾಂಸ್ಕೃತಿಕ ಕಾರ್ಯಕ್ರಮ:.
ಯಕ್ಷಗಾನ ತಾಳಮದ್ದಳೆ: “ಅಂಗದ ಸಂಧಾನ”
ಜಂಟಿ ಆಶ್ರಯ: ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ, ಸಿದ್ದಾಪುರ.
ಸಾರಥ್ಯ: ರಾಧಾಕೃಷ್ಣ ಕಲ್ಬರ್, ವಿಟ್ಲ.
ಸರ್ವರಿಗೂ ಆದರದ ಸ್ವಾಗತ ಬಯಸುವ:
ಆಡಳಿತ ಮಂಡಳಿ, ಪರ್ಯಾಯ ಅರ್ಚಕರು ಹಾಗೂ ಅರ್ಚಕ ಮಂಡಳಿ