+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ಬ್ರಹ್ಮಕಲಶ ವರ್ಧಂತ್ಯುತ್ಸವ 2026

ಆಸ್ತಿಕ ಬಂಧುಗಳೇ,

ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ “ಬ್ರಹ್ಮಕಲಶ ವರ್ಧಂತ್ಯುತ್ಸವ”ದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ದಿನಾಂಕ : 20-02-2026, ಶುಕ್ರವಾರ

ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಸ್ವಸ್ತಿ ವಾಚನ, ಪುಣ್ಯಾಹ, ಗಣಹೋಮ, ಶಾಂತಿ, ಪ್ರಾಯಶ್ಚಿತ್ತ ಹೋಮ, ತತ್ವಹೋಮ ಹಾಗೂ ಕಲಾಹೋಮ ನೆರವೇರಲಿದ್ದು, ಪೂರ್ವಾಹ್ನ ಘಂಟೆ 10:30ಕ್ಕೆ 108 ರಜತ ಕಲಶಾಭಿಷೇಕದೊಂದಿಗೆ ಪ್ರಧಾನ ಸುವರ್ಣ ಕಲಶಾಭಿಷೇಕ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ವಿನಾಯಕ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ. ಅಲ್ಲದೆ ಮಧ್ಯಾಹ್ನದ ಭೋಜನ ಪ್ರಸಾದವನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ.

ತಮ್ಮ ಆಗಮನಾಭಿಲಾಷಿಗಳು

ಶ್ರೀ ಕೆ. ಶ್ರೀರಮಣ ಉಪಾಧ್ಯಾಯ (ಆಡಳಿತ ಧರ್ಮದರ್ಶಿ), ಶ್ರೀ ನಿರಂಜನ್ ಉಪಾಧ್ಯಾಯ (ಧರ್ಮದರ್ಶಿ), ಶ್ರೀ ಕೆ. ಪದ್ಮನಾಭ ಉಪಾಧ್ಯಾಯ (ಧರ್ಮದರ್ಶಿ), ಶ್ರೀ ವ್ಯಾಸ ಉಪಾಧ್ಯಾಯ ಮತ್ತು ಸಹೋದರರು (ಪರ್ಯಾಯ ಅರ್ಚಕರು), ಅರ್ಚಕ ಮಂಡಳಿಯ ಸದಸ್ಯರು ಹಾಗೂ ಕಛೇರಿ ಸಿಬ್ಬಂದಿ ವರ್ಗ (ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಸಿ)