ಆಸ್ತಿಕ ಬಂಧುಗಳೇ,
ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ “ಬ್ರಹ್ಮಕಲಶ ವರ್ಧಂತ್ಯುತ್ಸವ”ದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಕೆಳಗಿನಂತೆ ಜರುಗಲಿವೆ.
ದಿನಾಂಕ : 02-03-2025, ಭಾನುವಾರ
ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಸ್ವಸ್ತಿ ವಾಚನ, ಪುಣ್ಯಾಹ, ಗಣಹೋಮ, ಶಾಂತಿ, ಪ್ರಾಯಶ್ಚಿತ್ತ ಹೋಮ, ತತ್ತ್ವಹೋಮ ಹಾಗೂ ಕಲಾಹೋಮ ನೆರವೇರಲಿವೆ.
ಪೂರ್ವಾಹ್ನ 10:30 ಗಂಟೆಗೆ 108 ರಜತ ಕಲಶಾಭಿಷೇಕದೊಂದಿಗೆ ಪ್ರಧಾನ ಸುವರ್ಣ ಕಲಶಾಭಿಷೇಕ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಿ, ಭೋಜನ ಪ್ರಸಾದವನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ತಮ್ಮ ಆಗಮನಾಭಿಲಾಷಿಗಳು
ಶ್ರೀ ಕೆ. ಶ್ರೀರಮಣ ಉಪಾಧ್ಯಾಯ (ಆಡಳಿತ ಧರ್ಮದರ್ಶಿ)
ಶ್ರೀ ನಿರಂಜನ್ ಉಪಾಧ್ಯಾಯ (ಧರ್ಮದರ್ಶಿ)
ಶ್ರೀ ಕೆ. ಪದ್ಮನಾಭ ಉಪಾಧ್ಯಾಯ (ಧರ್ಮದರ್ಶಿ)
ಶ್ರೀ ಕೆ. ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು (ಪರ್ಯಾಯ ಅರ್ಚಕರು)
ಅರ್ಚಕ ಮಂಡಳಿಯ ಸದಸ್ಯರು ಹಾಗೂ ಕಛೇರಿ ಸಿಬ್ಬಂದಿ ವರ್ಗ (ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಸಿ)