ಆಸ್ತಿಕ ಬಂಧುಗಳೇ,
ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ “ಬ್ರಹ್ಮಕಲಶ ವರ್ಧಂತ್ಯುತ್ಸವ”ದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಕೆಳಗಿನಂತೆ ಜರುಗಲಿವೆ.
ದಿನಾಂಕ : 16-03-2021, ಮಂಗಳವಾರ
ಬೆಳಿಗ್ಗೆ 5:30 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆ, ಸ್ವಸ್ತಿ ವಾಚನ, ಪುಣ್ಯಾಹ, ಗಣಹೋಮ, ಶಾಂತಿ, ಪ್ರಾಯಶ್ಚಿತ್ತ ಹೋಮ, ತತ್ತ್ವಹೋಮ ಹಾಗೂ ಕಲಾಹೋಮ ನೆರವೇರಲಿವೆ.
ಬೆಳಿಗ್ಗೆ 9:20 ಗಂಟೆಗೆ 108 ರಜತ ಕಲಶಾಭಿಷೇಕದೊಂದಿಗೆ ಪ್ರಧಾನ ಸುವರ್ಣ ಕಲಶಾಭಿಷೇಕ, ಮಂಗಳಾರತಿ ಹಾಗೂ ಮಂತ್ರಾಕ್ಷತೆ ನಡೆಯಲಿದೆ.
ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಿ, ಭೋಜನ ಪ್ರಸಾದವನ್ನು ಸ್ವೀಕರಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ತಮ್ಮ ಆಗಮನಾಭಿಲಾಷಿಗಳು
ಶ್ರೀ ಕೆ. ಶ್ರೀರಮಣ ಉಪಾಧ್ಯಾಯ (ಆಡಳಿತ ಧರ್ಮದರ್ಶಿ)
ಶ್ರೀ ಕೆ. ಗಣೇಶ ಉಪಾಧ್ಯಾಯ & ಸಹೋದರರು (ಪರ್ಯಾಯ ಅರ್ಚಕರು)
ಶ್ರೀ ಕೆ. ಸೂರ್ಯನಾರಾಯಣ ಉಪಾಧ್ಯಾಯ (ಧರ್ಮದರ್ಶಿ)
ಶ್ರೀ ಕೆ. ವಿಠಲ ಉಪಾಧ್ಯಾಯ (ಧರ್ಮದರ್ಶಿ)
ಅರ್ಚಕ ಮಂಡಳಿಯ ಸದಸ್ಯರು (ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಸಿ)