+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ಬ್ರಹ್ಮ ರಥೋತ್ಸವ 2025

ತಾ || 21-11-2025

ಮಾರ್ಗಶಿರ ಶುದ್ಧ ಪ್ರತಿಪತ್, ಶುಕ್ರವಾರ. ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ತಿವಾಚನ, ಗಣಪತಿ ಹೋಮ, ಅಥರ್ವಶೀರ್ಷ ಉಪನಿಷತ್ ಹೋಮ, ಸತ್ಯಗಣಪತಿ ವ್ರತ ಹಾಗೂ ಮಹಾಪೂಜೆ.

ರಾತ್ರಿ : ರಂಗಪೂಜೆ, ಡೋಲಾರೋಹಣ ಹಾಗೂ ಸುವರ್ಣ ಪಲ್ಲಕ್ಕಿ ಉತ್ಸವ

ತಾ || 22-11-2025

ಮಾರ್ಗಶಿರ ಶುದ್ಧ ದ್ವಿತೀಯಾ, ಶನಿವಾರ. ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ, ಗಣಪತಿ ಹೋಮ, ಸತ್ಯಗಣಪತಿ ವ್ರತ ಹಾಗೂ ಮಹಾಪೂಜೆ.

ರಾತ್ರಿ : ಪುರಮೆರವಣಿಗೆ, ರಂಗಪೂಜೆ ಹಾಗೂ ಸುವರ್ಣ ಪಲ್ಲಕ್ಕಿ ಉತ್ಸವ

ತಾ || 23-11-2025

ಮಾರ್ಗಶಿರ ಶುದ್ಧ ತೃತೀಯಾ, ಭಾನುವಾರ. ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿಜನನ ಹಾಗೂ ಗಣಪತಿ ಹೋಮ.

ರಾತ್ರಿ : ಪುರಮೆರವಣಿಗೆ, ರಂಗಪೂಜೆ ಹಾಗೂ ಸುವರ್ಣ ಪಲ್ಲಕ್ಕಿ ಉತ್ಸವ

ತಾ || 24-11-2025

ಮಾರ್ಗಶಿರ ಶುದ್ಧ ಚತುರ್ಥಿ, ಸೋಮವಾರ. ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ ಮತ್ತು ಬ್ರಹ್ಮರಥೋತ್ಸವ ನಡೆಯಲಿದ್ದು, ಭಜಕರಿಂದ ಪಾನಕ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗುವುದು.

ಸಂಜೆ 7:00 ಗಂಟೆಗೆ ರಥೋತ್ಸವ ಹಾಗೂ ಸುಡುಮದ್ದು ಪ್ರದರ್ಶನ

ತಾ || 25-11-2025

ಮಾರ್ಗಶಿರ ಶುದ್ಧ ಪಂಚಮಿ, ಮಂಗಳವಾರ. ಪೂರ್ವಾಹ್ನ ಚೂರ್ಣೋತ್ಸವ, ಅವಭೃತ ಸ್ನಾನ, ವಸಂತಾರಾಧನೆ ಹಾಗೂ ಮಂತ್ರಾಕ್ಷತೆ.