ತಾ || 02-12-2024
ಮಾರ್ಗಶಿರ ಶುದ್ಧ ಪ್ರತಿಪತ್, ಸೋಮವಾರ. ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ತಿವಾಚನ, ಗಣಪತಿ ಹೋಮ, ಅಥರ್ವಶೀರ್ಷ ಉಪನಿಷತ್ ಹೋಮ, ಸತ್ಯಗಣಪತಿ ವ್ರತ ಹಾಗೂ ಮಹಾಪೂಜೆ.
ರಾತ್ರಿ : ರಂಗಪೂಜೆ, ಡೋಲಾರೋಹಣ ಹಾಗೂ ಸುವರ್ಣ ಪಲ್ಲಕ್ಕಿ ಉತ್ಸವ
ತಾ || 03-12-2024
ಮಾರ್ಗಶಿರ ಶುದ್ಧ ದ್ವಿತೀಯಾ, ಮಂಗಳವಾರ. ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ, ಗಣಪತಿ ಹೋಮ, ಸತ್ಯಗಣಪತಿ ವ್ರತ ಹಾಗೂ ಮಹಾಪೂಜೆ.
ರಾತ್ರಿ : ಪುರಮೆರವಣಿಗೆ, ರಂಗಪೂಜೆ ಹಾಗೂ ಸುವರ್ಣ ಪಲ್ಲಕ್ಕಿ ಉತ್ಸವ
ತಾ || 04-12-2024
ಮಾರ್ಗಶಿರ ಶುದ್ಧ ತೃತೀಯಾ, ಬುಧವಾರ. ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿಜನನ ಹಾಗೂ ಗಣಪತಿ ಹೋಮ.
ರಾತ್ರಿ : ಪುರಮೆರವಣಿಗೆ, ರಂಗಪೂಜೆ ಹಾಗೂ ಸುವರ್ಣ ಪಲ್ಲಕ್ಕಿ ಉತ್ಸವ
ತಾ || 05-12-2024
ಮಾರ್ಗಶಿರ ಶುದ್ಧ ಚತುರ್ಥಿ, ಗುರುವಾರ. ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ ಮತ್ತು ಬ್ರಹ್ಮರಥೋತ್ಸವ ನಡೆಯಲಿದ್ದು, ಭಜಕರಿಂದ ಪಾನಕ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗುವುದು.
ಸಂಜೆ 7:00 ಗಂಟೆಗೆ ರಥೋತ್ಸವ, ಸುಡುಮದ್ದು ಪ್ರದರ್ಶನ ಹಾಗೂ ಸುವರ್ಣ ಪಲ್ಲಕ್ಕಿ ಉತ್ಸವ
ತಾ || 06-12-2024
ಮಾರ್ಗಶಿರ ಶುದ್ಧ ಪಂಚಮಿ, ಶುಕ್ರವಾರ. ಪೂರ್ವಾಹ್ನ ಚೂರ್ಣೋತ್ಸವ, ಅವಭ್ರತ ಸ್ನಾನ, ವಸಂತಾರಾಧನೆ ಹಾಗೂ ಮಂತ್ರಾಕ್ಷತೆ.