ಕುಂಭಾಸಿ: ವರ್ಷದಲ್ಲಿ ಒಂದೇ ಬಾರಿ ವಿವಿಧ ರೀತಿಯ ನೆರವುಗಳನ್ನು ದೇವಳದ ವತಿಯಿಂದ ನೀಡಲಾಗುತ್ತಿತ್ತು. ಆದರೆ 2019ರಿಂದ ವರ್ಷದಲ್ಲಿ ಎರಡು ಬಾರಿ ಅನಾರೋಗ್ಯಪೀಡಿತ ಹಾಗೂ ಆಶಕ್ತರಿಗೆ ನೆರವು ನೀಡುವ ಬಗ್ಗೆ ದೇವಳದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಆನೆಗುಡ್ಡೆ ದೇವಳದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ತಿಳಿಸಿದ್ದಾರೆ.
ಕುಂಭಾಸಿ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದ ವತಿಯಿಂದ 2019ರ ಸಾಲಿನ ವೈದ್ಯಕೀಯ ನೆರವನ್ನು ಆಶಕ್ತರಿಗೆ ಗುರುವಾರ ದೇವಳದ ಸಭಾಭವನದಲ್ಲಿ ವಿತರಿಸಿ ಅವರು ಮಾತನಾಡಿದರು.
ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಹಿರಿಯ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹಾಗೂ
ಕೆ. ವಿಠಲ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ಸಹಾಯಧನ ವಿತರಿಸಿ ಸಮಾಜಸೇವಾ ಕೈಂಕರ್ಯದಲ್ಲಿ ದೇವಳ ತೊಡಗಿಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರ್ಯಾಯ ಅರ್ಚಕ ಕೆ. ಚಂದ್ರಕಾಂತ ಉಪಾಧ್ಯಾಯ, ವ್ಯವಸ್ಥಾಪಕ ನಟೇಶ್ ಕಾರಂತ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.