+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ವಿನಾಯಕ ಚತುರ್ಥಿ -2026

ಸ್ವಸ್ತಿ ಶ್ರೀ ಪರಾಭವ ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥೀ ಶ್ರೀ ವಿನಾಯಕ ಚತುರ್ಥೀ ಪ್ರಯುಕ್ತ ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ

ದಿನಾಂಕ : 14-09-2026ನೇ ಸೋಮವಾರ “ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ಹಾಗೂ ಮಹಾ ಅನ್ನಸಂತರ್ಪಣೆ” ನಡೆಯಲಿರುವುದು.

ಶ್ರೀ ವಿನಾಯಕ ಚತುರ್ಥೀ ಪ್ರಯುಕ್ತ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು

ಗೌರಿ ತೃತೀಯ ಹಾಗೂ ವಿನಾಯಕ ಚತುರ್ಥೀ

ದಿನಾಂಕ : ಸೆಪ್ಟೆಂಬರ್ 14, ಸೋಮವಾರ 2026
ಪೂರ್ವಾಹ್ನ ಗಂಟೆ 10:00 ರಿಂದ 11:00 ರ ವರೆಗೆ — ಭಜನಾ ಕಾರ್ಯಕ್ರಮ (ಶ್ರೀ ವಿಶ್ವೇಶ್ವರ ಮಹಿಳಾ ಭಜನಾ ಮಂಡಳ, ಆನೆಗುಡ್ಡೆ-ಕುಂಭಾಸಿ ಇವರಿಂದ)

ಪೂರ್ವಾಹ್ನ ಗಂಟೆ 11:00 ರಿಂದ ಮಧ್ಯಾಹ್ನ 1:00 ರ ವರೆಗೆ — ಭಜನಾ ಕಾರ್ಯಕ್ರಮ (ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಕುಂದಾಪುರ ಇವರಿಂದ)

ಮಧ್ಯಾಹ್ನ ಗಂಟೆ 3:00 ರಿಂದ ಸಂಜೆ ಗಂಟೆ 05:00 ರ ವರೆಗೆ — ಶಾಸ್ತ್ರೀಯ ಗಿಟಾರ್ ವಾದನ (ಕಲಾವಿದರು : ಶ್ರೀ ಶರತ್ ಹಳಿಯಂಗಡಿ ಹಾಗೂ ಬಳಗ ಇವರಿಂದ)

ಸಂಜೆ ಗಂಟೆ 5:00 ರಿಂದ — ಯಕ್ಷಗಾನ ಪ್ರಸಂಗ : ಲಂಕಾ ದಹನ (ಯಕ್ಷಾಂತರಂಗ (ರಿ.) ಕಾರಂತ ಥೀಮ್ ಪಾರ್ಕ್, ಕೋಟ, ಉಡುಪಿ ತಾಲೂಕು ಇವರಿಂದ)

ರಾತ್ರಿ ಗಂಟೆ 10:00 ರಿಂದ — ಯಕ್ಷಗಾನ ಪೌರಾಣಿಕ ಪ್ರಸಂಗ (ಶ್ರೀ ದಶಾವತಾರ ಯಕ್ಷಗಾನ ಮಂಡಳ ಹಾಗೂ ವಿವಿಧ ಕಲಾವಿದರ ಕೂಡುವಿಕೆಯಿಂದ)

ದಿನಾಂಕ : 15-09-2026ನೇ ಮಂಗಳವಾರ
ಮಧ್ಯಾಹ್ನ ಗಂಟೆ 2:30 ರಿಂದ — ಭಜನಾ ಕಾರ್ಯಕ್ರಮ (ಶಿವಳ್ಳಿ ಭಜನಾ ಮಂಡಳ ಕಾವೂರು, ಮಂಗಳೂರು ಜಿಲ್ಲೆ ಇವರಿಂದ)

ಸಂಜೆ ಗಂಟೆ 5:00 ರಿಂದ — ಯಕ್ಷಗಾನ ತಾಳಮದ್ದಳೆ ಪ್ರಸಂಗ : ಭೀಷ್ಮೋತ್ಪತ್ತಿ (ಶ್ರೀ ಮಹಾಗಣಪತಿ ಲಕ್ಷ್ಮೀನಾರಾಯಣ ಯಕ್ಷಕೂಟ ಇವರಿಂದ)

ಮ್ಮೆಳದಲ್ಲಿ:
ಶ್ರೀ ಹರೀಶ ಕಾವಡಿ ಮತ್ತು ಬಳಗ.

ಮುಮ್ಮೆಳದಲ್ಲಿ:
ಶ್ರೀ ಆದಿತ್ಯ ಹೆಗ್ಡೆ ಯಡೂರ
ಶ್ರೀ ಗುರುಪ್ರಸಾದ ಸರಳಾಯ
ಶ್ರೀ ಚಂದ್ರಶೇಖರ ಕಿಟ್ಟಿ ಕೊಳ್ಳೂರ
ಶ್ರೀ ಮನೋಹರ ನಾಯ್ಕ
ಶ್ರೀ ವಾಸುದೇವ ನಾಯ್ಕ, ಬಸ್ರೂರ

ಸೂಚನೆ:
ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ವಿನಾಯಕ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂ.

ವಿ.ಸೂ.: ವಿನಾಯಕ ಚತುರ್ಥೀಯ ಪ್ರಯುಕ್ತ ಬೆಳಿಗ್ಗೆ 6.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ದೇವಸ್ಥದ ವತಿಯಿಂದ ಭಕ್ತಾದಿಗಳಿಗೆ ವಿಶೇಷ ಪ್ರಸಾದವನ್ನು ಉಚಿತವಾಗಿ ವಿತರಿಸಲಾಗುವುದು.

ಸರ್ವರಿಗೂ ಆದರದ ಸ್ವಾಗತ ಬಯಸುವ
ಪರ್ಯಾಯ ಅರ್ಚಕರು, ಆಡಳಿತ ಮಂಡಳಿ ಮತ್ತು ಅರ್ಚಕ ಮಂಡಳಿ