ಆಸ್ತಿಕ ಬಂಧುಗಳೇ,
ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ “ಬ್ರಹ್ಮಕಲಶ ವರ್ಧಂತ್ಯುತ್ಸವ”ದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಕೆಳಗಿನಂತೆ ಜರುಗಲಿವೆ.
ದಿನಾಂಕ : 22-02-2023, ಬುಧವಾರ
ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಸ್ವಸ್ತಿ ವಾಚನ, ಪುಣ್ಯಾಹ, ಗಣಹೋಮ, ಶಾಂತಿ, ಪ್ರಾಯಶ್ಚಿತ್ತ ಹೋಮ, ತತ್ವಹೋಮ ಹಾಗೂ ಕಲಾಹೋಮ ನೆರವೇರಲಿವೆ.
ಪೂರ್ವಾಹ್ನ 10:45 ಗಂಟೆಗೆ 108 ರಜತ ಕಲಶಾಭಿಷೇಕದೊಂದಿಗೆ ಪ್ರಧಾನ ಸುವರ್ಣ ಕಲಶಾಭಿಷೇಕ, ಮಂಗಳಾರತಿ ಹಾಗೂ ಮಂತ್ರಾಕ್ಷತೆ ನಡೆಯಲಿದೆ.
ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಿ, ಭೋಜನ ಪ್ರಸಾದವನ್ನು ಸ್ವೀಕರಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ತಮ್ಮ ಆಗಮನಾಭಿಲಾಷಿಗಳು
ಶ್ರೀ ಕೆ. ಶ್ರೀರಮಣ ಉಪಾಧ್ಯಾಯ (ಆಡಳಿತ ಧರ್ಮದರ್ಶಿ)
ಶ್ರೀ ಕೆ. ದೇವಿದಾಸ ಉಪಾಧ್ಯಾಯ (ಪರ್ಯಾಯ ಅರ್ಚಕರು)
ಶ್ರೀ ಕೆ. ಸೂರ್ಯನಾರಾಯಣ ಉಪಾಧ್ಯಾಯ (ಧರ್ಮದರ್ಶಿ)
ಶ್ರೀ ಕೆ. ವಿಠಲ ಉಪಾಧ್ಯಾಯ (ಧರ್ಮದರ್ಶಿ)
ಅರ್ಚಕ ಮಂಡಳಿಯ ಸದಸ್ಯರು ಕಛೇರಿ ಸಿಬ್ಬಂದಿ ವರ್ಗ (ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಸಿ)