+91 9480272221 ( Seva Section 6-00 a.m. to 8-30 p.m. ). Guest House - +91 9740673533
Development Work
2023 ರಲ್ಲಿ ದೇವಳ ಹೆಬ್ಬಾಗಿಲಿಗೆ ತಾಗಿಕೊಂಡಿರುವ ಪೌಳಿಯಲ್ಲಿ ಸುಮಾರು ಒಂದು ಕಾಲು ಕೋಟಿ ವೆಚ್ಚದಲ್ಲಿ ಸಾಗುವಾನಿ ಮರದಿಂದ ನಿರ್ಮಾಣವಾದ ದಾರುಶಿಲ್ಪ, ಹಾಗೂ ಬೆಳ್ಳಿಯ ವಸಂತ ಮಂಟಪ ಕಲಾ ಪ್ರೌಡಿಮೆಗೆ ಸಾಕ್ಷಿಯಾಗಿದೆ.
ಸುಮಾರು 15 ಲಕ್ಷ ವೆಚ್ಚದಲ್ಲಿ ದೇವರಿಗೆ ನಿತ್ಯ ನೈವೇದ್ಯಕ್ಕೆ ಬೇಕಾಗುವ ಹಾಲು ಮೊಸರಿಗಾಗಿ ಶಾಶ್ವಾತ ಗೋ ಕುಟೀರವನ್ನು ನಿರ್ಮಾಣ ಮಾಡಲಾಗಿದೆ.
ದೇವಸ್ಥಾನ ಆವರಣದಲ್ಲಿ ಸುಗಮ ವಾಹನ ಸಂಚಾರಕ್ಕೆ ಉತ್ತಮ ಪಾರ್ಕಿಂಗ್ ವ್ಯವಸ್ತೆ ಕಲ್ಪಿಸಲಾಗಿದೆ.
ಶ್ರೀ ದೇವಳದ ಅನ್ನದ ಚತ್ರದ ಮೇಲ್ಚಾವಣಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ಕೆನರಾ ಬ್ಯಾಂಕ್ ನ ಸಹಪ್ರಾಯೋಜಕತ್ವದಲ್ಲಿ ಸೊಲಾರ್ ವಿದ್ಯುತ್ ಘಟಕ ಸ್ಥಾಪಿಸಲಾಗಿದೆ.
ದೇವಳದ ಹಿಂಬಾಗ 1 ಕಿಲೊಮೀಟರ್ ದೂರದಲ್ಲಿ ಧಾನಿಯೊಬ್ಬರಿಂದ ಬ್ರಹತ್ ತೆರೆದ ಭಾವಿಯನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ.
ದೇವರ ಪ್ರಸಾದ ಕಡುಬು ಹಾಗೂ ಪಂಚಕಜ್ಜಾಯ ಹಾಗೂ ಇತ್ಯಾದಿ ತಯಾರಿಸಲು ನೂತನ ಹೈಜಿನಿಕ್ ಕಟ್ಟಡವನ್ನು ನಿರ್ಮಿಸಲು ಅಂದಾಜಿಸಲಾಗಿದೆ.
ಪ್ತತೀ ವರ್ಷವೂ ಶ್ರೀ ದೇವಳದ ವತಿಯಿಂದ ಸುಮಾರು ಹತ್ತರಿಂದ ಇಪ್ಪತ್ತು ಲಕ್ಷಕ್ಕೂ ಅದಿಕ ಮೊತ್ತವನ್ನು ಇತರ ದೇವಾಲಯದ ಜೀರ್ಣೋದ್ಧಾರ ಹಾಗೂ ಕ್ಯಾನ್ಸರ್ ಕಿಡ್ನಿ ಹಾಗೂ ಹೃದಯದ ರೋಗಿಗಳಿಗೆ ದೇಣಿಗೆಯನ್ನು ಕೊಡಲಾಗುತ್ತಿದೆ.