ಶ್ರೀ ಆನೆಗುಡ್ಡೆ ಕ್ಷೇತ್ರದಲ್ಲಿ ‘ಭಜನಾ ತರಬೇತಿ ಶಿಬಿರ’ ಉದ್ಘಾಟನೆ:
ದಿನಾಂಕ 12-10-2026ರ ಸೋಮವಾರದಂದು ಬೆಳಿಗ್ಗೆ 9.00 ಗಂಟೆಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್,ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ *’ಭಜನಾ ತರಬೇತಿ ಶಿಬಿರ’* ವನ್ನು
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರರು ಹಾಗೂ ಗೌರವಾಧ್ಯಕ್ಷರಾದ ಶ್ರೀ ಶ್ರೀರಮಣ ಉಪಾಧ್ಯಾಯರು ಸೇರಿದ ಎಲ್ಲಾ ಗಣ್ಯರೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಅವರು ತರಬೇತಿಗೆ ಚಾಲನೆ ನೀಡಿದರು.
ತಾಲೂಕು ಅಧ್ಯಕ್ಷರು ಹಾಗೂ ಪ್ರಾದೇಶಿಕ ಭಜನಾ ಪರಿಷತ್ ಉಪಾಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್, ಬಸ್ರೂರು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕುಂದಾಪುರ ವಲಯ -2 ರ ಯೋಜನಾಧಿಕಾರಿಗಳಾದ ಸುಧೀರ್ ಹಂಗಳೂರು,
ಉಡುಪಿ ಜಿಲ್ಲಾ ಸಮನ್ವಯ ಅಧಿಕಾರಿಗಳಾದ ರವೀಂದ್ರ ಎಸ್. ಭಜನಾ ಪರಿಷತ್ತಿನ ಕಾರ್ಯಕರ್ತರು ಹಾಗೂ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸುಬ್ಬಣ್ಣ, ಕೋಣಿ ಇವರು ಕಾರ್ಯಕ್ರಮ ನಿರೂಪಿಸಿದರು.
ತರಬೇತಿಯ ವಿವರಗಳು:
ಶಿಬಿರದಲ್ಲಿ ಕುಳಿತು ಹಾಗೂ ಕುಣಿತ ಭಜನಾ ತರಬೇತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಿದುಷಿ ಉಷಾ ಹೆಬ್ಬಾರ್, ಶ್ರೀ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಶ್ರೀ ಬಿ. ನಾಗೇಶ್ ನೆರಿಯ, ಬೆಳ್ತಂಗಡಿ,ಅವರು ನೀಡಲಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ( ಹಾರ್ಮೋನಿಯಂ) ಶ್ರೀ ರಾಜೇಂದ್ರ ಕುಮಾರ್ ಬಸ್ರೂರು, ಶ್ರೀ ವಿದ್ವಾನ್ ರಾಮಕೃಷ್ಣ ಆಚಾರ್ಯ ಬಸ್ರೂರು, ಹಾಗೂ ತಬಲಾದಲ್ಲಿ ಆದಿತ್ಯ ಆಚಾರ್ಯ ವಂಡ್ಸೆ ಸಹಕರಿಸಿದ್ದಾರೆ.
ಶಿಬಿರದ ವೇಳಾಪಟ್ಟಿ:
ಈ ತರಬೇತಿ ಶಿಬಿರವು ವಿವಿಧ ದಿನಾಂಕಗಳಂದು ನಡೆಯಲಿದ್ದು, ವೇಳಾಪಟ್ಟಿ ಹೀಗಿದೆ:
12-10-2026 (ಸೋಮವಾರ): ಬೆಳಿಗ್ಗೆ 9.00 ರಿಂದ
25-10-2026 (ರವಿವಾರ): ಬೆಳಿಗ್ಗೆ 9.00 ರಿಂದ
01-11-2026 (ರವಿವಾರ): ಮಧ್ಯಾಹ್ನ 2.00 ರಿಂದ
15-11-2026 (ರವಿವಾರ): ಬೆಳಿಗ್ಗೆ 9.00 ರಿಂದ
22-11-2026 (ರವಿವಾರ): ಬೆಳಿಗ್ಗೆ 9.00 ರಿಂದ
ಮಂಗಳೋತ್ಸವ: ದಿನಾಂಕ 28-11-2026 ರ ಶನಿವಾರ ಮಧ್ಯಾಹ್ನ 3.00 ಗಂಟೆಗೆ ನಡೆಯಲಿದೆ.
ವಿಶೇಷ ಸೂಚನೆಗಳು:
ಈ ಶಿಬಿರವು ಎಲ್ಲಾ ವಯೋಮಾನದ ಆಸಕ್ತರಿಗೆ ಮುಕ್ತವಾಗಿರುತ್ತದೆ.
ತರಬೇತಿ ಅವಧಿಯಲ್ಲಿ ಭಾಗವಹಿಸುವವರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಹೆಸರು ನೋಂದಾಯಿಸಿಕೊಳ್ಳಲು ಆಸಕ್ತರು ರಾಜೇಂದ್ರ ಕುಮಾರ್ ಬಸ್ರೂರು (9901817922) ಅಥವಾ ರವೀಂದ್ರ ಎಸ್. (ಸಮನ್ವಯಾಧಿಕಾರಿ – 9844239223) ಅವರನ್ನು ಸಂಪರ್ಕಿಸಬಹುದಾಗಿದೆ.