ದಿನಾಂಕ 01.09.2026 ಮಂಗಳವಾರ ದಂದು ಶ್ರೀ ಕ್ಷೇತ್ರ ಆನೆಗುಡ್ಡೆ ವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕುಭಜನಾ ಪರಿಷತ್ ನ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಜರುಗಿತು.
*ಸಭೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕರಾದಂತಹ ಜಿ ಸುಬ್ರಹ್ಮಣ್ಯ ಪ್ರಸಾದ್ ರವರು ಉದ್ಘಾಟಿಸಿ, ಇಂದಿನ ಯುವ ಪೀಳಿಗೆಯ ಸಂಸ್ಕಾರಯುತವಾದ ಜೀವನವನ್ನು ಸಾಗಿಸಲು ಹಾಗೂ ಧಾರ್ಮಿಕ ಜಾಗೃತಿ ಮೂಡಿಸಲು ಯುವಕರ* *ಹುಚ್ಚು ಮನಸ್ಥಿತಿಯನ್ನು ಕಟ್ಟಿ ಹಾಕುವ ಶಕ್ತಿ ಎನ್ನುವಂಥದ್ದು ಇರುವುದಾದರೆ ಅದು ಭಜನೆಗೆ ಮಾತ್ರ ಹಾಗೂ ಭಜನೆಯಿಂದ ಮನಸ್ಸಿಗೆ ಶಾಂತಿ ಏಕಾಗ್ರತೆ ನೆಮ್ಮದಿ ದೊರಕುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾ ಅತಿಹೆಚ್ಚಿನ ಸಂಖ್ಯೆಯಲ್ಲಿ* *ಶಿಬಿರಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
*ಸಭೆಯ ಗೌರವಾಧ್ಯಕ್ಷರಾದ ಶ್ರೀ ಶ್ರೀರಮಣ ಉಪಾಧ್ಯ ಅನುವಂಶಿಕ ಆಡಳಿತ ಧರ್ಮದರ್ಶಿಗಳು ವಿನಾಯಕ ದೇವಸ್ಥಾನ ಆನೆಗುಡ್ಡೆ ಕುಂದಾಪುರ ತಾಲೂಕು 5 ದಿನದ ಭಜನಾ ತರಬೇತಿ ಶಿಬಿರಕ್ಕೆ ತಾಲೂಕು ಮಟ್ಟದ ಭಜನೋತ್ಸವ ಕಾರ್ಯಕ್ರಮಕ್ಕೆ ಸಂಪೂರ್ಣವಾದ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
*ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷ ರಾದ ರಾಜೇಂದ್ರ ಕುಮಾರ್ ಬಸ್ರೂರು ರವರು ವಹಿಸಿದ್ದು, ಆನೆಗುಡ್ಡೆ ದೇವಸ್ಥಾನ ಕುಂದಾಪುರ ದಲ್ಲಿ 5 ದಿನದ ಭಜನಾ ತರಬೇತಿ ಶಿಬಿರ ಮತ್ತು ತಾಲೂಕು ಮಟ್ಟದ ಭಜನೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
* ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದಂತಹ ಶ್ರೀ ನಾಗರಾಜ್ ಶೆಟ್ಟಿ , ಶ್ರೀ ರಾಮಕಿಶನ್ ಹೆಗ್ಡೆ ಆಡಳಿತ ಧರ್ಮದರ್ಶಿಗಳು , ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ,ಭಜನಾ ಪರಿಷತ್ತಿನ ಗೌರವ ಸಲಹೆಗಾರರಾಗಿರುವಂತಹ ಶ್ರೀಮತಿ ಅನುಪಮ ಎಸ್ ಶೆಟ್ಟಿ ಕುಂದಾಪುರ ಶ್ರೀ ಹರೀಶ್ ಶಾನಭೋಗ್ ಬ್ರಹ್ಮಾವರ ಯೋಜನಾಧಿಕಾರಿಗಳಾದಂತಹ ಶ್ರೀ ಸುಧೀರ್, ಶ್ರೀ ಉಮೇಶ್ ಶೆಟ್ಟಿ, ಶ್ರೀ ರಮೇಶ್ ಪಿಕೆ, ಬ್ರಹ್ಮಾವರ ತಾಲೂಕು ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರಸನ್ನ ಕುಮಾರ್ ಹಾಗೂ ಕಾರ್ಯದರ್ಶಿ ಸುರೇಂದ್ರ ಶೆಟ್ಟಿ,ಉಡುಪಿ ಜಿಲ್ಲಾ ಸಮನ್ವಯ ಅಧಿಕಾರಿ ರವೀಂದ್ರ ಎಸ್, ಉಪಸ್ಥಿತರಿದ್ದರು.
28ನೇ ವರ್ಷದ ಭಜನಾ ಕಮ್ಮಟ ತರಬೇತಿಗೆ ಆಯ್ಕೆಯಾದ ಶಿಬಿರಾರ್ಥಿಗಳ ಸ್ವರ ಪರೀಕ್ಷೆಯನ್ನು ನಡೆಸಲಾಯಿತು.
ಉಭಯ ತಾಲೂಕಿನ ಎಲ್ಲಾ ವಲಯ ಸಂಯೋಜಕರು ಭಜನಾ ಮಂಡಳಿಗಳ ಅಧ್ಯಕ್ಷರು ಕಾರ್ಯದರ್ಶಿಗಳು, ಯೋಜನಾ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶ್ರೀ ನರಸಿಂಹ ಪೂಜಾರಿ ನಿವೃತ್ತ ವಿಸ್ತರಣಾಧಿಕಾರಿಗಳು ಕಾರ್ಯಕ್ರಮವನ್ನು ನಿರೂಪಿಸಿದರು ಯೋಜನಾಧಿಕಾರಿಗಳಾದ ಉಮೇಶ್ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು.