ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನೂತನ ಉದ್ಯಾನವನ ನಿರ್ಮಾಣದ ಮುಹೂರ್ತ ಸಮಾರಂಭ:
ಆನೆಗುಡ್ಡೆ: ದಿನಾಂಕ 16.08.2026 ಭಾನುವಾರದಂದು ಇಲ್ಲಿನ ಜಗತ್ಪ್ರಸಿದ್ಧ ಶ್ರೀ ವಿನಾಯಕ ದೇವಸ್ಥಾನದ ವಠಾರದಲ್ಲಿ . ‘ವರ್ಣ ಕೋಟ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು’ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸುಮಾರು ₹3 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಂದರ ನೂತನ ಉದ್ಯಾನವನದ ನಿರ್ಮಾಣ ಮುಹೂರ್ತವನ್ನು ಸಂಸ್ಥೆಯ ಪಾಲುದಾರರು ದೇವರ ನಿತ್ಯ ಪೂಜೆಗೆ ಬೇಕಾದಂತಹ ಹೂವು ತುಳಸಿ, ಗರಿಕೆ,ಪತ್ರೆಯ ಗಿಡವನ್ನು ನೆಡುವುದರ ಮೂಲಕ ಚಾಲನೆ ನೀಡಿದರು.
ಈ ಸಮಾರಂಭದಲ್ಲಿ ವರ್ಣ ಕೋಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ
ಸಂಸ್ಥೆಯ ಪಾಲುದಾರರಾದ ನಾಗರಾಜ ರಾವ್, ಎಚ್.ಸಿ. ಸತ್ಯನಾರಾಯಣ ಹಾಗೂ ಎಂ. ಪ್ರದೀಪ್ ಉಪಸ್ಥಿತರಿದ್ದರು.
ವಿಶೇಷ ಅತಿಥಿಗಳಾಗಿ ದಿವಂಗತ ಕೋಟೇಶ್ವರ ಡಾ. ಕೃಷ್ಣರಾವ್ ಅವರ ಪುತ್ರರಾದ ವಾಸುದೇವ ರಾವ್,, ರಮಾಕಾಂತ ರಾವ್ ಹಾಗೂ ಆನಂದ ರಾವ್ ಭಾಗವಹಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ಧರ್ಮದರ್ಶಿ ಪದ್ಮನಾಭ ಉಪಾಧ್ಯಾಯ ಹಾಗೂ ಪರ್ಯಾಯ ಅರ್ಚಕ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಉಪಸ್ಥಿತರಿದ್ದು ಪ್ರಾಯೋಜಕರಿಗೆ ಫಲ-ಪುಷ್ಪ ನೀಡಿ ಆಶೀರ್ವದಿಸಿ ಅಭಿನಂದಿಸಿದರು.
ಶುಭಾಶಂಸನೆಗೈದ ವಿದ್ವಾನ್ ಗೋಪಾಡಿ ರಾಘವೇಂದ್ರ ಭಟ್ ಅವರು, “ಧಾರ್ಮಿಕ ಕ್ಷೇತ್ರಗಳಲ್ಲಿ ಗಿಡ-ಮರಗಳನ್ನು ಬೆಳೆಸಿ ಪ್ರಕೃತಿ ಸೌಂದರ್ಯವನ್ನು ವೃದ್ಧಿಸುವುದು ಆ ಕ್ಷೇತ್ರದ ಪವಿತ್ರತೆ ಮತ್ತು ಸಾತ್ವಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ” ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ನಿರ್ವಹಣೆ ರಾಜಾರಾಮ ಉಪಾಧ್ಯಾಯ ನಡೆಸಿಕೊಟ್ಟರು. ದೇವಸ್ಥಾನದ ಮ್ಯಾನೇಜರ್ ನಟೇಶ್ ಕಾರಂತ್, ಸಿಬ್ಬಂದಿ ವರ್ಗದವರು ಹಾಗೂ ಭಕ್ತಾದಿಗಳು ಸಾಕ್ಷಿಯಾದರು.